Wednesday 7 January 2009

ಒಂದು ಪ್ರೇಮ ನಿರಾಕರಣೆಯ ನಂತರ ಅನ್ನಿಸಿದ್ದು....

ನೀನು ಇಲ್ಲ ಅಂದೆ,
ಒಳ್ಳೆಯದಾಯಿತು!
ನೀನು ಒಪ್ಪಿದ್ದರೆ
ರಂಗು ಮಾತಿನಲ್ಲಿ,
ಸುಳ್ಳು ಬಣ್ಣಗಳಲ್ಲಿ ,
ಒಂದಿಷ್ಟು ದರ್ಪದಲ್ಲಿ,
ಮತ್ತೊಂದಿಷ್ಟು ಜಾತಿ - ವರ್ಗಗಳ
ವಾದ - ವಿವಾದದಲ್ಲಿ
ಮುದ್ರಿತ ಲಗ್ನ ಪತ್ರಿಕೆಯಲ್ಲಿ,
ಬಂಧು - ಬಳಗದ ಕೊಂಕು ಮಾತಿನಲ್ಲಿ,
ಮಂಟಪದ ಜಗ ಮಗದಲ್ಲಿ,
ನಂತರ
ಬೆಂಕಿ ಪೆಟ್ಟಿಗೆಯಂಥ ಮನೆಯಲ್ಲಿ,
ಅದರ ಗೋಡೆಗಳಲ್ಲಿ,
ಬಿಗ್ ಬಜಾರು ಸ್ಪೆನ್ಸರ್ ಸೂಪರ್ ಮಾರ್ಕೆಟ್ಟು ಗಳಲ್ಲಿ ,
ಬದುಕು ಒಡ್ಡುವ ಸಾವಿರ ಪ್ರಶ್ನೆಗಳಲ್ಲಿ ,
ಪವಿತ್ರವೆಂದುಕೊಂಡಿರುವ ಈ ಪ್ರೇಮ
ಉಸಿರುಗಟ್ಟಿ ನರಳುತ್ತಿತ್ತು!

5 comments:

  1. Very meaningful.. enlightens the truth with consoling oneself... :)

    ReplyDelete
  2. ಯಾರ್ ಸಾರ್ ನಿರಾಕರಿಸಿದ್ದು

    ReplyDelete
  3. ಅಂಜನ, ಯಾರು ನಿರಾಕರಿಸಿದ್ದು ಅನ್ನೋದು ಅಷ್ಟು important ಅಲ್ಲ. ಆದ್ರೆ, ಅವ್ರು ಹಾಗೆ ಮಾಡಿದ್ದು ಪ್ರೇಮ, ಬದುಕು ಮತ್ತು ಜನರ ಬಗ್ಗೆ ನಾನು ತುಂಬ ಯೋಚನೆ ಮಾಡೋ ಹಾಗೆ ಮಾಡ್ತು. ಒಂದು ಅರ್ಥದಲ್ಲಿ ಒಳ್ಳೇದೆ ಆಯಿತು!

    ReplyDelete
  4. ಭಾಗಷ್ಯ ನಗರೀಕರಣ ಜೀವನದಲ್ಲಿ ಪ್ರೀತಿ ಪ್ರೇಮ ಅನ್ನೋದು, ಜೀವನದ ಜಂಜಾಟದಲ್ಲಿ ಸತ್ತು ಹೋಗೋ ಸಾದ್ಯತೇನೆ ಜಾಸ್ತಿ. ಇಷ್ಟ ಆಯಿತು ಕವನ.

    ReplyDelete